How to Control Aging?

ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಂಶೋಧಕರು ಹಲವಾರು ತಂತ್ರಗಳನ್ನು ಹುಡುಕುತ್ತಾ ಬಂದಿದ್ದಾರೆ. ಆದರೆ ನಾವು ಮಾಡಬೇಕಾದ ಪ್ರಮುಖ ವಿಷಯವೆಂದರೆ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು.


ನಾವು ನೈಸರ್ಗಿಕ ಬದಲಾವಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸ್ವಲ್ಪ ಶ್ರಮ ಪಟ್ಟರೆ ಇನ್ನೂ ಚಿಕ್ಕವರಾಗಿ ಕಾಣಿಸಬಹುದು.

ಕೆಲವು ಪ್ರಮುಖ ಸಲಹೆಗಳು:



ಡಿಟಾಕ್ಸ್ - ಇದು ವಿಷಕಾರಿ ಅಥವಾ ಅನಾರೋಗ್ಯಕರ ಪದಾರ್ಥಗಳು ದೇಹವನ್ನು ತ್ಯಜಿಸುವ ಅಥವಾ ತೊಡೆದುಹಾಕುವ ಪ್ರಕ್ರಿಯೆ. ವಾಸ್ತವವಾಗಿ, ದೇಹದ ಚಯಾಪಚಯ ಕ್ರಿಯೆಯು ಆ ಪ್ರಕ್ರಿಯೆಯನ್ನು ಮಾಡುತ್ತವೆ, ಆದರೆ ದೈನಂದಿನ ಜೀವನದಲ್ಲಿ ನಾವು ಗಾಳಿ, ಆಹಾರ ಮತ್ತು ಪರಿಸರದಿಂದ ಅನೇಕ ರಾಸಾಯನಿಕ ಅಪಾಯಗಳಿಗೆ ಒಳಗಾಗುತ್ತೇವೆ. ಉಪವಾಸ ಅಥವಾ ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸುವುದು ನಮ್ಮ ದೇಹವನ್ನು ನಿರ್ವಿಷಗೊಳಿಸುವ ವಿಧಾನಗಳಾಗಿವೆ.


ನಿದ್ರೆ - ದಿನಕ್ಕೆ ಕನಿಷ್ಠ 6-8 ಗಂಟೆಗಳಾದರೂ ಸಾಕಷ್ಟು ನಿದ್ದೆ ಮಾಡುವುದು ಅಗತ್ಯ. ನಿದ್ರಿಸುವ ಸಮಯದಲ್ಲಿ ಬೆಳವಣಿಗೆಯ ಹಾರ್ಮೋನ್ ಕಾರ್ಯನಿರ್ವಹಿಸುತ್ತಿರುವುದರಿಂದ ಉತ್ತಮ ನಿದ್ರೆ ಕೂಡ ಮುಖ್ಯವಾಗಿದೆ. ಇದು ನಮ್ಮ ದೇಹದ ಹಳೆಯ ಕೋಶವನ್ನು ನವೀಕರಿಸುತ್ತದೆ, ಇದರಲ್ಲಿ ಚರ್ಮದ ಕೋಶಗಳೂ ಸಹ ಒಳಗೊಂಡಿವೆ. ನಾವು ಸಾಕಷ್ಟು ನಿದ್ದೆ ಮಾಡಿದರೆ ಮಾತ್ರ ನಮ್ಮ ಚರ್ಮವು ತಾಜಾ ಮತ್ತು ಎಳೆಯದಾಗಿ ಕಾಣುತ್ತದೆ. https://amzn.to/3Bnzsic


ಆಹಾರ - ಪ್ರತಿದಿನ ಆರೋಗ್ಯಕರ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ, ಸ್ಲಿಮ್ ಆಗಿರುತ್ತದೆ ಮತ್ತು ನಮ್ಮನ್ನು ಕಿರಿಯರಾಗಿ ಕಾಣಲು ಸಹಾಯ ಮಾಡುತ್ತದೆ. ಕೆಂಪು ಮಾಂಸದ ಬದಲು ಹೆಚ್ಚು ಮೀನು ತಿನ್ನಲು ಪ್ರಯತ್ನಿಸಿ. ಫೈಬರ್ ಆಹಾರ, ತರಕಾರಿಗಳು, ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಬಳಸಿ. ಕಾಫಿ ಮತ್ತು ಇತರ ಕೆಫೀನ್ ಪಾನೀಯಗಳನ್ನು ಕಡಿಮೆ ಮಾಡಿ. ಧೂಮಪಾನ ಮತ್ತು ಮದ್ಯಪಾನವನ್ನು ನಿಲ್ಲಿಸಿ.

ವ್ಯಾಯಾಮ - ದಿನನಿತ್ಯದ ವ್ಯಾಯಾಮದ ಮೂಲಕ, ನಾವು ಶಕ್ತಿ, ಸಂತೋಷ, ಮತ್ತು ಆತ್ಮವಿಶ್ವಾಸವನ್ನು ಗಳಿಸುತ್ತೇವೆ. ವ್ಯಾಯಾಮ ನಮ್ಮ ಮೂಳೆಯ ಸಾಂದ್ರತೆ ಮತ್ತು ಸ್ನಾಯುಗಳನ್ನು ಹೆಚ್ಚಿಸುತ್ತದೆ ಮತ್ತು ಇದು ನಮ್ಮ ದೇಹವನ್ನು 15-20 ವರ್ಷ ಚಿಕ್ಕವರನ್ನಾಗಿ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಏರೋಬಿಕ್, ವಾಕಿಂಗ್ ಮತ್ತು ಈಜು ಇದರ ಜೊತೆಗೆ ಹಲವರು ಜಿಮ್‌ಗೆ ಲಿಫ್ಟಿಂಗ್ ಎಕ್ಸರ್ಸೈಜ್ ಕೂಡ ಮಾಡಲು ಹೋಗುತ್ತಾರೆ.Active wear


ರಿಲ್ಯಾಕ್ಸ್ - ಮುಖದಲ್ಲಿ ಒತ್ತಡ ಮತ್ತು ಚಿಂತೆಗಳು ಕಾಣಿಸಿಕೊಳ್ಳದಿರಲು ರಿಲ್ಯಾಕ್ಸ್ ಆಗಿ ಇರಿ. ರಿಲ್ಯಾಕ್ಸ್ ಆಗಿರಲು ಪ್ರಯತ್ನಿಸುವುದರಿಂದ, ನಮ್ಮ ಮುಖವು ಎಳೆಯದಾಗಿ ಕಾಣುತ್ತದೆ. ನಾವು ನಮ್ಮ ಒತ್ತಡವನ್ನು ನಿರ್ವಹಿಸಲು ಕಲಿತರೆ, ನಮ್ಮ ಮುಖವು ಆಕರ್ಷಕವಾಗಿ ಕಾಣುವುದರಲ್ಲಿ ಸಂದೇಹವೇ ಇಲ್ಲ.



ವೈದ್ಯಕೀಯ ತಪಾಸಣೆ - ನಮ್ಮ ದೇಹ ಒಂದು ಮೋಟಾರ್ ಕಾರಿನಂತೆ,  ಕಾರಿಗೆ ಹೇಗೆ ಸರ್ವಿಸಿಂಗ್ ಅಗತ್ಯವೋ , ಚೆನ್ನಾಗಿ ಕೆಲಸ ಮಾಡಬೇಕಾದರೆ ನಮ್ಮ ದೇಹಕ್ಕೂ ಗಮನ ಮತ್ತು ಕಾಳಜಿಯ ಅಗತ್ಯವಿರುತ್ತದೆ. ನಿಯಮಿತ ವೈದ್ಯಕೀಯ ತಪಾಸಣೆ ಮಾಡುವುದರಿಂದ ಸಾಧ್ಯವಾದಷ್ಟು ಬೇಗ ರೋಗಗಳನ್ನು ಗುರುತಿಸಲು ಮತ್ತು ತಡೆಗಟ್ಟಲು ಸಾಧ್ಯ.


ಸಕ್ರಿಯ ಜೀವನ - ನಿಮ್ಮ ಜೀವನದಲ್ಲಿ ಯಾವಾಗಲೂ ಸಕ್ರಿಯರಾಗಿರಲು ಪ್ರಯತ್ನಿಸಿ. ಚಟುವಟಿಕೆಗಳು ಆರೋಗ್ಯವನ್ನು ಹೆಚ್ಚಿಸಬಹುದು; ಮತ್ತು ನೀವು ನಿಮ್ಮ ಹಿರಿಯ ವಯಸ್ಸಿನಲ್ಲಿದ್ದರೆ, ನಿಮ್ಮ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ.



ಸಾಮಾಜಿಕ ಜೀವನ - ಸಂತೋಷದ ಸಾಮಾಜಿಕ ಜೀವನವು ನಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ,
 ಶಾಂತಿಯುತ ಮನಸ್ಸನ್ನು ನೀಡುತ್ತದೆ, ಮತ್ತು ನಮ್ಮನ್ನು ಕಿರಿಯರಾಗಿ ಕಾಣುವಂತೆ ಮಾಡುತ್ತದೆ. ನಮ್ಮ ಸ್ನೇಹಿತರು, ಕುಟುಂಬ, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಇತರರೊಂದಿಗೆ ಬೆರೆಯುವುದು ನಮಗೆ ಸಂತೋಷವನ್ನು ತರಬಹುದು.


ಇವೆಲ್ಲದರ ಜೊತೆ ನಮ್ಮ ಚರ್ಮ Vitamin C face serum for glowing skin, ಕೂದಲು, ಉಗುರು ಮತ್ತು ಹಲ್ಲುಗಳ ಆರೈಕೆ ಕೂಡ ಮುಖ್ಯ. ನಮ್ಮ ವಯಸ್ಸಿನ ನಿಯಂತ್ರಣದಲ್ಲಿ ಅವುಗಳ ಪಾತ್ರ ಕೂಡ ಅಪಾರ. ಪ್ರತಿದಿನ ಸನ್ ಸ್ಕ್ರೀನ್ ಹಚ್ಚಿ Sunscreen, ಉತ್ತಮ ಹೇರ್ ಕಟ್ ಆಯ್ಕೆ ಮಾಡಿಕೊಳ್ಳಿ, ನಿಮ್ಮ ಉಗುರುಗಳಿಗೆ ನಿಯಮಿತ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ Manicure, pedicure kits ನೀಡಿ. ಇಷ್ಟರವರೆಗೆ ವಯಸ್ಸಾಗುವಂತೆ ಕಾಣುವ ಬಟ್ಟೆಗಳನ್ನು ಧರಿಸುವವರಾಗಿದ್ದರೆ, ಮೊದಲು ನಿಮ್ಮ ವಾರ್ಡ್ರೊಬನ್ನು ಬದಲಿಸಿ. ನಿಮ್ಮ ದೇಹದ ತೂಕ ಇದಕ್ಕೆ ಸೂಕ್ತವಿಲ್ಲದಿದ್ದರೆ, ಅದನ್ನು ಅತ್ಯುತ್ತಮ ಮಾದರಿ ತೂಕಕ್ಕೆ ಸರಿಪಡಿಸಲು ಪ್ರಯತ್ನಿಸಿ ಮತ್ತು ಚಿಕ್ಕವರಾಗಿ ಕಾಣುವ ಬಟ್ಟೆಗಳನ್ನು ಆರಿಸಿ ಮತ್ತು ಆತ್ಮವಿಶ್ವಾಸದಿಂದ ಅದನ್ನು ಧರಿಸಿ.



Comments